Sri sat upasi | Dodderi appaji | sri sat upasi appaji | sadguru appaji

ಶ್ರೀ ಗುರು ಕನ್ನೇಶ್ವರ ಆಶ್ರಮ, ದೊಡ್ಡೇರಿ (ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ) ವತಿಯಿಂದ ಪ್ರಕಟಿಸಿರುವ ಈ ಕೆಳಗಿನ ಪುಸ್ತಕಗಳು ಮತ್ತು ಸಿಡಿಗಳು ಮಾರಾಟಕ್ಕೆ ಲಭ್ಯವಿವೆ ಎಂದು ಎಲ್ಲಾ ಆಧ್ಯಾತ್ಮಿಕ ಆನಂದವನ್ನು ಬಯಸುವವರ ಗಮನಕ್ಕೆ ತರಲು ಇಚ್ಛಿಸಿದೆ:
ಪುಸ್ತಕಗಳು:
1.ಘನಾನುಭವಸಾರ
2.ಗುರು ಕರುಣಾಮೃತ ರಸ
3.ಸುಜ್ಞಾನ ಸಂಪದ್ಭರಿತ
4. ವಂಡರ್ಸ್ ಆಫ್ ವಂಡರ್ (ಇಂಗ್ಲಿಷ್)
5.ಶಿವಾನುಗ್ರಹ
6.ಮಹದಾಶ್ಚರ್ಯ
7. ಶ್ರೀಪಾದ ಶ್ರೀವಲ್ಲಭ ಚರಿತ್ರೆ (ಲಘು)
8. ಶ್ರೀಗುರುವಾಣಿ ಪರಮಾಮೃತಸಾರ
9.ಶ್ರೀಪಾದ ಶ್ರೀವಲ್ಲಭ ದಿವ್ಯಚರಿತ್ರೆ(Available in online) Buy Now:
10.ಶ್ರೀಸತ್ ಉಪಾಸಿ ಲೀಲಾಮೃತ.
11.In depth of God Experience (English)
12.ಜ್ಞಾನ ನಿಧಿ
13.ದತ್ತ ಪುರಾಣ.
14.ಭಗವದಾಶ್ಚರ್ಯ.
15.ಪುರುಷಾರ್ಥ ಪರಮಜ್ಯೋತಿ
16 ದತ್ತ ಭಾಗವತ
ಸಿಡಿಗಳು:
1.ಸದ್ಗುರುವಾಣಿ : ಭಾಗ-2.
2..ಸದ್ಗುರುವಾಣಿ : ಭಾಗ-3
3. ಶ್ರೀ ಗುರು ದತ್ತ ಸಂಪತ್ತು (ಭಜನೆಗಳು)
4.ಶ್ರೀ ದತ್ತ ಗುರು ಕನ್ನೇಶ್ವರ ಸುಜ್ಞಾನಭರಿತ: ಭಾಗ 1
5 .ದತ್ತಾನುಗ್ರಹ (ಭಜನೆಗಳು)
6.ದತ್ತಾನುಭವ (ಭಜನೆಗಳು)
7.ಶ್ರೀಪಾದರಾಜಂ ಶರಣಂ ಪ್ರಪದ್ಯೇ (ಭಜನೆಗಳು)
ವಿ.ಸೂ: ಈ ಪುಸ್ತಕ/ ಸಿಡಿಗಳನ್ನು ಖರೀದಿಸುವವರು ಭಾರತದ ಯಾವುದೇ ಭಾಗದಲ್ಲಿದ್ದರೂ ಅವರಿಗೆ ಕೊರಿಯರ್ ಮೂಲಕ ತಲುಪಿಸಲಾಗುವುದು.
ಮೇಲಿನ ಪುಸ್ತಕ/ ಸಿಡಿಗಳ ಖರೀದಿಗೆ, ದಯವಿಟ್ಟು ಶ್ರೀ ಸುರೇಂದ್ರ ಬಾಬು ಅವರನ್ನು ಸಂಪರ್ಕಿಸಿ 7483856652, 9243700597
21 names of lord shiva
* ಶಿವನ 21 ಹೆಸರುಗಳು ಮತ್ತು ಅರ್ಥ*.
*ಸೋಮವಾರ ಶಿವನಿಗೆ ವಿಶೇಷವಾಗಿ ಪ್ರಿಯವಾದ ವಾರ*.
ಏಕೆಂದರೆ ಸೋಮವಾರ ‘ಸೋಮ’ ಅಂದರೆ ಚಂದ್ರನ ವಾರ. ಚಂದ್ರ ಮಹಾದೇವನ ಪರಮ ಭಕ್ತ. ಮಹಾದೇವನ ಪ್ರೀತ್ಯರ್ಥ ಆತನ ಶಿರವನ್ನು ಅಲಂಕರಿಸಿರುವನು. ಆದ್ದರಿಂದ ಮಹಾದೇವನಿಗೆ ಸೋಮಶೇಖರ, ಚಂದ್ರಮೌಳಿ, ಚಂದ್ರಶೇಖರ ಎಂಬಿತ್ಯಾದಿ ಹೆಸರುಗಳೂ ಇವೆ.
*ಸೋಮವಾರದಂದು* ಶಿವನ ನಾಮಗಳ ಸ್ಮರಣೆ ಮಾಡಿದರೆ ವಿಶೇಷ ಪ್ರಯೋಜನವಿದೆ
*ಈ ಹೆಸರುಗಳು ಮತ್ತು ಅವುಗಳ ಅರ್ಥವನ್ನಿಲ್ಲಿ ನೋಡೋಣ
1. *ಶಿವ* : ಮಂಗಳಕರನಾದುದರಿಂದ ಈತ ‘ಶಿವ’. ಶಿವ ಎಂಬ ಪದದ ಅರ್ಥವೇ ‘ಮಂಗಳ’.
2. *ವಾಮದೇವ* : ವಾಮ ಎಂದರೆ ಸುಂದರ. ಶಿವನಷ್ಟು ಸುಂದರ ಯಾರೂ ಇಲ್ಲ ಎಂಬ ಕಾರಣದಿಂದ ಈತನನ್ನು ‘ವಾಮ ದೇವ’ ಎಂದು ಸ್ತುತಿಸಲಾಗಿದೆ.
3. *ಸುಂದರೇಶ್ವರ*: ಗಜಚರ್ಮಾಂಬರ ಧಾರಿಯಾದ ಶಿವನು ಪಾರ್ವತೀದೇವಿಯನ್ನು ಮದುವೆಯಾಗಲು ಬಂದಾಗ ಆತನ ಅತ್ತೆ ಗಾಬರಿಯಿಂದ ತಲೆ ತಿರುಗಿ ಬೀಳುತ್ತಾಳೆ. ಆಗ ಆಕೆಯನ್ನು ಸಮಾಧಾನ ಪಡಿಸಲು ಶಿವನು ನಾನಾವಿಧಾಲಂಕಾರ ಭೂಷಿತನಾಗಿ *ಸುಂದರೇಶ್ವರನ* ರೂಪ ತಾಳುತ್ತಾನೆ.
4. *ವೃಷಭಧ್ವಜ*: ಎತ್ತು ಅಥವಾ ನಂದಿಯನ್ನು ವಾಹನವಾಗಿ ಹೊಂದಿರುವುದರಿಂದ ಶಿವನು
‘ವೃಷಭಧ್ವಜ’’
5. *ಆಶುತೋಶ* : ಭಕ್ತರಿಗೆ ಒಲಿದು ಶೀಘ್ರದಲ್ಲಿ ವರ ನೀಡುವುದರಿಂದ ಆಶುತೋಷ
6. *ಗಂಗಾಧರ* : ಗಂಗೆಯನ್ನು ಶಿರಸ್ಸಿನಲ್ಲಿ ಧರಿಸಿರುವುದರಿಂದ ಶಿವನು ‘ ಗಂಗಾಧರ’
7. *ಪಿನಾಕಿ* : ಪಿನಾಕ ಧನಸ್ಸನ್ನು ಧರಿಸಿರುವುದರಿಂದ ಈ ಹೆಸರು.
8. *ವಿಷಕಂಠ* : ಸಮುದ್ರಮಥನ ಸಂದರ್ಭದಲ್ಲಿ ಹಾಲಾಹಲ ವಿಷವನ್ನು ನುಂಗಿ ಗಂಟಲಲ್ಲಿ ಇರಿಸಿಕೊಂಡು ಲೋಕವನ್ನು ರಕ್ಷಿಸಿದ ಈತ ವಿಷಕಂಠ. ಆಗ ಗಂಟಲು ನೀಲಿಗಟ್ಟಿ ‘ನೀಲಕಂಠ’ನೆಂಬ ಹೆಸರನ್ನೂ ಪಡೆದ.
9. ಸಾರಂಗಪಾಣಿ : ದಕ್ಷಿಣಾಮೂರ್ತಿ ರೂಪದಲ್ಲಿ ಶಿವನು ಕೈಯಲ್ಲಿ ಸಾರಂಗವನ್ನು ಧರಿಸಿರುವುದರಿಂದ ಸಾರಂಗಪಾಣಿ ಎಂಬ ಹೆಸರು.
10. *ನಟರಾಜ* : ನಾಟ್ಯದ ಮೂಲಕ ಅಪಸ್ಮಾರನನ್ನು ನಿಯಂತ್ರಿಸಿದ ಕಾರಣ ಈತ ನಟರಾಜ
11. *ಸದ ಶಿವ* : ಸದಾ ಸಜ್ಜನರಿಗೆ ಮಂಗಳವನ್ನು ಕರುಣಿಸುವನಾದ್ದರಿಂದ, “ಸದಾಶಿವ”
12. *ನಾಗಾಭರಣ* : ನಾಗ (ಸರ್ಪವನ್ನು)ನನ್ನು ಆಭರಣವಾಗಿ ಧರಿಸಿರುವುದರಿಂದ “ನಾಗಾಭರಣ.
13. *ತ್ರಿಪುರಾರಿ* : ತ್ರಿಪುರಾಸುರನನ್ನು ಸಂಹಾರ ಮಾಡಿದ್ದರಿಂದ – “ತ್ರಿಪುರಾರಿ”
14. *ಮೃತ್ಯುಂಜಯ* : ಮೃತ್ಯುವಿಗೆ ಅಭಿಮಾನಿಯಾದ ಯಮನನ್ನೂ ಮೀರಿಸಿರುವುದರಿಂದ “ಮೃತ್ಯುಂಜಯ”
15. *ಧೂರ್ಜಟಿ* : ತಪಸ್ಸಿನಿಂದಾಗಿ ಜಟೆಯನ್ನು ಹೊಂದಿರುವ ಕಾರಣದಿಂದ “ಧೂರ್ಜಟಿ”
ಕಾಮಾರಿ : ಕಾಮನನ್ನು ಗೆದ್ದು, ಆತನನ್ನು ದಹಿಸಿದ್ದರಿಂದ ಈತ ಕಾಮಾರಿ.
16. *ಮಹಾದೇವ* : ದೇವತೆಗಳ ದೇವನಾದ್ದರಿಂದ ‘ಮಹಾದೇವ’
17. ಅರ್ಧನಾರೀಶ್ವರ : ತನ್ನ ದೇಹದ ಅರ್ಧಭಾಗದಲ್ಲಿ ಪಾರ್ವತಿಯನ್ನು ಹೊಂದಿರುವುದರಿಂದ ಈತ ಅರ್ಧನಾರೀಶ್ವರ
18. *ಶಂಕರ* : ಶಂ ಎಂದರೆ ಸುಖ. ಸಕಲ ಸುಖವನ್ನೂ ಕರುಣಿಸುವವನು ಶಂಕರ
19. *ಆದಿಯೋಗಿ* : ಮಹಾ ತಾಪಸಿಯಾದ ಶಿವ ಯೋಗಿಗಳ ಮಹಾದೇವ. ಯೋಗಿಗಳ ಪರಮಗುರು. ಆದ್ದರಿಂದ ಈ ಹೆಸರು
20. ಮಹಾಕಾಲ : ಸ್ವಯಂ ಕಾಲನೂ, ಮಹಾಕಾಳಿಯ ಅರ್ಧಾಂಗನೂ ಆಗಿರುವುದರಿಂದ ಈ ಹೆಸರು.
21. ಕಾಮಾರಿ : ಕಾಮನನ್ನು ಗೆದ್ದು, ಆತನನ್ನು ದಹಿಸಿದ್ದರಿಂದ ಈತ ಕಾಮಾರಿ.
🙏🙏🕉🕉🕉🕉️🕉️🕉️🙏🙏
🙏ಓಂ ನಮಃ ಶಿವಾಯ-ಹರಿ ಓಂ 🙏
Ganagapur History In Kannada, ganagapur dattatreya temple information in kannada
*ದತ್ತ ಗುರುವಿನ ದಿವ್ಯ ಕ್ಷೇತ್ರ ಶ್ರೀ ಗಾಣಗಪುರ.*
ಶ್ರೀ ಕ್ಷೇತ್ರ ಗಾಣಗಾಪುರ ಕರ್ನಾಟಕದ ಸುಪ್ರಸಿದ್ಡ ಧಾರ್ಮಿಕ ಕ್ಷೇತ್ರ. *ಶ್ರೀ ಕ್ಷೇತ್ರ ಗಾಣಗಾಪುರವು ಗುಲ್ಬರ್ಗಾದಿಂದ ನಗರದಿಂದ ಸುಮಾರು ೫೦ ಕಿಲೋಮೀಟರುಗಳ ದೂರದಲ್ಲಿದೆ.*
ದತ್ತಸಂಪ್ರದಾಯದ ಒಂದು ಪವಿತ್ರ ತೀರ್ಥಕ್ಷೇತ್ರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯಲ್ಲಿ ಪುಣೆ - ರಾಯಚೂರು ರೈಲುಮಾರ್ಗದಲ್ಲಿರುವ ಗಾಣಗಾಪುರ ರೈಲುನಿಲ್ದಾಣದಿಂದ 22 ಕಿಮೀ ದೂರದಲ್ಲಿ *ಭೀಮಾ- ಅಮರಜ ನದಿಗಳ ಸಂಗಮದ ಹತ್ತಿರ ಈ ಊರು ಇದೆ.*
*ಶ್ರೀಗುರುಚರಿತ್ರೆ ಎಂಬ* ಗ್ರಂಥದಲ್ಲಿ ಇದನ್ನು ಗಾಣಗಾಪುರ, ಗಾಣಗಾಭವನ, ಗಂಧರ್ವಭವನ, ಗಂಧರ್ವಪುರ ಎಂಬ ಹೆಸರುಗಳಿಂದ ಉಲ್ಲೇಖಿಸ ಲಾಗಿದೆ.
*ಪಾತಿವ್ರತ್ಯದ ಶಕ್ತಿಯಿಂದ ತ್ರಿಮೂರ್ತಿಗಳನ್ನು ತನ್ನ ಮಕ್ಕಳನ್ನಾಗಿ ಮಾಡಿದ ಅನಸೂಯಾ ಕಥೆ ನಮಗೆ ತಿಳಿದದ್ದೇ.*
*ತ್ರಿಮೂರ್ತಿಗಳು ಒಂದೇ ಅವತಾರದಲ್ಲಿ ನೆಲೆಸಿದ್ದು* ದೇವಲಗಾಣಗಾಪುರದಲ್ಲಿ .
*ಸೃಷ್ಟಿಕರ್ತ, ಸೃಷ್ಟಿರಕ್ಷಕ, ಲಯಕರ್ತ ಈ ಮೂವರು ಒಂದೇ ರೂಪದಲ್ಲಿ ನೆಲೆಸಿರುವ*
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲಗಾಣಗಾಪುರ
*ಪವಿತ್ರ ತಾಣ. ಬ್ರಹ್ಮ, ವಿಷ್ಣು, ಮಹೇಶ್ವರರು ದತ್ತಾತ್ರೇಯ ಎಂಬ ನಾಮದಿಂದ ಅವತರಿಸಿದ ಪಾವನಕ್ಷೇತ್ರ ಇದಾಗಿದೆ.*
ದತ್ತಾವತಾರಿ ಎಂದು ಪ್ರಸಿದ್ಧಿಹೊಂದಿರುವ ಶ್ರೀನರಸಿಂಹ ಸರಸ್ವತಿಯವರು ವಾಡಿ ಎಂಬ ಊರಿನಿಂದ ಇಲ್ಲಿಗೆ *ಬಂದು ಸುಮಾರು 23 ವರ್ಷ ನೆಲೆಸಿದ್ದರು.* ಈ ಅವಧಿಯಲ್ಲಿ ಇಲ್ಲಿ ದತ್ತಸಂಪ್ರದಾಯವನ್ನನುಸರಿಸುವವರ ಸಂಖ್ಯೆ ಹೆಚ್ಚಾಯಿತು. ಸರಸ್ವತಿಯವರು ಮೊದಲು ಸಂಗಮದ ಹತ್ತಿರವೇ ವಾಸವಾಗಿದ್ದು ಅನಂತರ ಊರ ಮಧ್ಯದಲ್ಲಿರುವ ಮಠದಲ್ಲಿರತೊಡಗಿ ಮುಂದೆ ಶ್ರೀಶೈಲದ ಕಡೆಗೆ ತೆರಳಿದರು. ಮಠದ ಆವಾರದಲ್ಲಿ ಮಹಾದೇವ - ಪಾರ್ವತಿಯರ ಮೂರ್ತಿ, *ಅಶ್ವತ್ಥವೃಕ್ಷದ ಪೊದರಿನಲ್ಲಿ ನಾಗನಾಥ ಮತ್ತು ಹನುಮಂತನ ಮೂರ್ತಿಗಳು ತುಲಸೀ ವೃಂದಾವನಗಳು ಗೋಚರವಾಗುತ್ತವೆ.*
ಈ ಮಠದಲ್ಲಿರುವ ಶ್ರೀಗುರುಗಳ *ಪಾದುಕೆಗಳು ನಿರ್ಗುಣ ಪಾದುಕೆಗಳೆಂದು ಹೆಸರಾಗಿವೆ.*
ವಾಡಿಯಲ್ಲಿರುವ ಪಾದುಕೆಗಳನ್ನು ಮನೋಹರ ಪಾದುಕೆಗಳೆನ್ನುತ್ತಾರೆ.
*ಮಠದ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಎರಡು ಮಹಾದ್ವಾರ ಗಳಿವೆ*. ಪಶ್ಚಿಮದ ಮಹಾದ್ವಾರ ವಿಶಾಲವಾಗಿದ್ದು ಅದರ ಮಹಡಿಯಲ್ಲಿ ನಗಾರಖಾನೆ (ದೇವಸ್ಥಾನದ ನಗಾರಿಗಳನ್ನು ಬಾರಿಸುವ ಜಾಗ) ಇದೆ. ಭಕ್ತಾದಿಗಳು ಕೂಡಲು ಯೋಗ್ಯವಾದ ಏಳು ಜಗಲಿಗಳಿವೆ.
*ಗರ್ಭಗುಡಿಯಲ್ಲಿನ ಪಾದುಕೆಗಳ ದರ್ಶನ ಮಾಡಬೇಕಾದರೆ* ಉಡುಪಿಯಲ್ಲಿರುವಂತೆ ಒಂದು ಬೆಳ್ಳಿಯ ಕಿಟಕಿಯ ಮೂಲಕ ನೋಡಬೇಕಾಗುತ್ತದೆ. ಇಲ್ಲಿ ನಿತ್ಯೋಪಾಸನೆ ಬೆಳಗ್ಗಿನಿಂದ ಪ್ರಾರಂಭವಾಗುತ್ತದೆ. ಪಾದುಕೆಗಳಿಗೆ ಜಲಸ್ಪರ್ಶ ಮಾಡುವುದಿಲ್ಲ. *ಕೇಸರಿ ಮತ್ತು ಅಷ್ಟಗಂಧಗಳನ್ನು ಲೇಪಿಸುತ್ತಾರೆ.*
ಪ್ರತಿ *ಗುರುವಾರ ರಾತ್ರಿ ಪಲ್ಲಕ್ಕಿಸೇವೆ ನಡೆಯುತ್ತದೆ.*
*ಇಂದಿಗೂ ಗಾಣಗಾಪುರದಲ್ಲಿ ದತ್ತಮಹಾರಾಜರು ಶ್ರೀಪಾದರು ಹಾಗೂ ನರಸಿಂಹ ಸರಸ್ವತಿಗಳು ಮೂರು ಅವತಾರಗಳಲ್ಲಿ ನೆಲೆಸಿ ಭಕ್ತರನ್ನು ಉದ್ಧರಿಸುತ್ತಿದ್ದಾರೆ.*
*ದತ್ತನ ಪಾದುಕಾಪೂಜೆ ಇಲ್ಲಿನ ವಿಶೇಷ.*
*ದತ್ತಜಯಂತಿ, ನರಸಿಂಹ ಸರಸ್ವತಿ ಜಯಂತಿ ಆಚರಿಸಲಾಗುತ್ತದೆ.*
ಮಹಾರಾಷ್ಟ್ರ *ಭಕ್ತರು ದತ್ತನ ದರ್ಶನಕ್ಕೆ ಹೆಚ್ಚಾಗಿ ಆಗಮಿಸುತ್ತಾರೆ.*
ಕಲಬುರಗಿಯಿಂದ ಕೇವಲ 35-40 ಕಿಮೀ ದೂರದಲ್ಲಿರುವ ಈ ಕ್ಷೇತ್ರಕ್ಕೆ ಬಸ್ ಮತ್ತು ರೈಲು ಸಂಚಾರ ವ್ಯವಸ್ಥೆ ಇದೆ.
ಊರಿನಿಂದ 1.6 ಕಿಮೀ ದೂರದಲ್ಲಿ ಭೀಮಾ- ಅಮರಜ ನದಿಗಳ ಸಂಗಮದ ಹತ್ತಿರ ಭಸ್ಮದ ರಾಶಿಯಿದೆ. ಹಿಂದೆ ಇಲ್ಲಿ ಯಜ್ಞಕಾರ್ಯಗಳು ನೆರವೇರುತ್ತಿದ್ದು ಆ ಯಜ್ಞಬೂದಿಯನ್ನು ಹೀಗೆ ಒಂದು ಕಡೆ ಗುಡ್ಡೆ ಮಾಡಲಾಗಿದೆಯೆಂದು ಪ್ರತೀತಿ. ಭಾವುಕ ಭಕ್ತರು ಸ್ನಾನಮಾಡಿದ ಅನಂತರ ಈ ಭಸ್ಮವನ್ನು ಲೇಪಿಸಿಕೊಳ್ಳುವರು.
*ಸಂಗಮೇಶ್ವರ ದೇವಾಲಯದ ಎದುರು ಶ್ರೀನರಸಿಂಹ ಸರಸತ್ವಿಯವರ ತಪೋಭೂಮಿ ಇದೆ.* ಸಂಗಮದಿಂದ ಊರಿಗೆ ಬರುವ ದಾರಿಯಲ್ಲಿ ಷಟ್ಕುಲತೀರ್ಥ, ನರಸಿಂಹತೀರ್ಥ, ಭಾಗೀರಥೀತೀರ್ಥ, *ಪಾಪವಿನಾಶಿತೀರ್ಥ,* ಕೋಟಿತೀರ್ಥ, ರುದ್ರಪಾದತೀರ್ಥ, ಚಕ್ರತೀರ್ಥ ಮತ್ತು ಮನ್ಮಥತೀರ್ಥ ಎಂಬ *ಎಂಟು ತೀರ್ಥಗಳಿವೆ.*
ಇಲ್ಲಿನ *ತೀರ್ಥಗಳಲ್ಲಿ ಸ್ನಾನಮಾಡಿದರೆ* ಅನೇಕ ಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ.
ಗಾಣಗಾಪುರದ ಉತ್ಸವ ಸಮಾರಂಭಗಳಲ್ಲಿ
*ಶ್ರೀದತ್ತಜಯಂತಿ ಮತ್ತು ಶ್ರೀನರಸಿಂಹ ಸರಸ್ವತಿಯವರ ಪುಣ್ಯತಿಥಿ* - ಇವೆರಡು ವಿಶೇಷ ಮಹತ್ತ್ವದವು.
*ಶ್ರೀಗುರುವಿನ ಜೀವನಕಾರ್ಯ ಇಲ್ಲಿಯೇ ನಡೆದುದರಿಂದ ಈಗ ಸು. 500 ವರ್ಷಗಳಿಂದ ಇದು ಭಕ್ತರಿಗೆ ಜಾಗೃತ ಸ್ಥಾನವಾಗಿದೆ.*
ಆಧಿವ್ಯಾಧಿಗಳಿಂದ ಬಳಲುವ ಅನೇಕ ಜನ ತಮ್ಮ *ದುಃಖನಿವಾರಣೆಗಾಗಿ ಇಲ್ಲಿಗೆ ಬಂದು ಸೇವೆಮಾಡಿ*
*ಶ್ರೀಗುರುಚರಿತ್ರೆ* ಪಾರಾಯಣಮಾಡಿ ಭಿಕ್ಷಾ ಜೀವನವನ್ನು ನಡೆಸುವರು.
*ಶ್ರೀಗುರುಚರಿತ್ರೆಯಲ್ಲಿನ ಚಮತ್ಕಾರಿ* ಕಥೆಗಳನ್ನೋದುವುದರಿಂದ ಶ್ರದ್ಧಾಜೀವನವನ್ನನುಸರಿಸುವುದರಲ್ಲಿ ವಿಶ್ವಾಸ ಹುಟ್ಟುತ್ತದೆ.
*ಮಠದಲ್ಲಿ ಮಧ್ಯಾಹ್ನ ಮಹಾನೈವೇದ್ಯ ನಡೆಯುತ್ತದೆ*. ಅನಂತರ ಸೇವಾಕರ್ತರು ಮಧುಕರಿ ಬೇಡಲು ಹೋಗುತ್ತಾರೆ. *ಧನಿಕರಾದ ಅನೇಕ ದತ್ತಭಕ್ತರು ಸೇವಾಕರ್ತರಿಗೆ ಧನಧಾನ್ಯ ಸಹಾಯ ಒದಗಿಸುತ್ತಿದ್ದಾರೆ.*
ದತ್ತವ್ರತದ ಪ್ರಕಾರ ಪ್ರತಿಯೊಬ್ಬ ಯಾತ್ರಿಕನೂ *ಕನಿಷ್ಠಪಕ್ಷ ಐದು ಮನೆಗಳಿಗಾದರೂ ಹೋಗಿ* ಬೇಡಬೇಕು ಎಂಬುದು ನಿಯಮ. ಭಾವುಕ ಭಕ್ತರು ಈ ನಿಯಮವನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಾರೆ.
*ತಲುಪುವ ಮಾರ್ಗ*👇
*ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ಗಳಿಂದ* ರೈಲಿನಲ್ಲಿ ಆಗಮಿಸುವ ಭಕ್ತರು ಕಲಬುರಗಿ ರೈಲು ನಿಲ್ದಾಣದಲ್ಲಿಳಿದು ಬಸ್ ಮೂಲಕ ನೇರವಾಗಿ ದೇವಲಗಾಣಗಾಪುರಕ್ಕೆ ತೆರಳಬಹುದು.
*ಇಲ್ಲವಾದರೆ ಸ್ಟೇಷನ್ ಗಾಣಗಾಪುರದ ರೈಲು ನಿಲ್ದಾಣದಲ್ಲಿಳಿದು 15 ಕಿ.ಮೀ. ಕ್ರಮಿಸಿ ದೇವಲಗಾಣಗಾಪುರಕ್ಕೆ ತಲುಪಬೇಕಾಗುತ್ತದೆ.*
*ಮುಂಬೈ-ಚೆನ್ನೈ ಮುಖ್ಯ ರೈಲು ಮಾರ್ಗದಲ್ಲಿ ಸ್ಟೇಷನ್ ಗಾಣಗಾಪುರ ನಿಲ್ದಾಣವಿದೆ.* ಅಫಜಲಪುರ ಮಾರ್ಗವಾಗಿಯೂ ಈ ಕ್ಷೇತ್ರಕ್ಕೆ ತೆರಳಬಹುದಾಗಿದೆ.
Needu Shiva needadiru Shiva Lyrics in Kannada | ನೀಡು ಶಿವ ನೀಡದಿರು ಶಿವ.
ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ ||ಪ||
ನಾನೇಕೆ ಅಂಜಲಿ ನೀ ನನ್ನ ಅಂಬಲಿ |
ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ ||ಅ.ಪ||
ಶೃಂಗಾರ ಕೃತಕ ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರವೇಕೆ
ನೀನಿತ್ತ ಕಾಯ ನಿನ ಶೈಲಿ ಮಾಯ
ಆಗೋದು ಹೋಗೋದು ನಾ ಕಾಣೆನೆ ||1||
ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರೂ
ನಾನಂತೂ ನಿನ್ನನ್ನಲಾರೆ
ಸಾರಂಗ ಮನಕೆನೂರಾರು ಬಯಕೆ
ಮುಂದಿಟ್ಟುಉಣಿಸೋದು ನಾ ಕಾಣೆನೆ ||2||
Dayamaya Guru karunamaya lyrics in Kannada | Dayamaya Guru karunamaya lyrics in English
ಪರಮಹಂಸ ಸದ್ಗುರು ಶ್ರೀ ಸತ್ ಉಪಾಸಿ ರಚಿಸಿರುವ,
ಘನಾನುಭವಸಾರ ಗ್ರಂಥ.
Kannada Lyrics
ದಯಾಮಯ ಗುರು ಕರುಣಾಮಯ |
ಕರುಣಾಮಯ ಗುರು ಪ್ರೇಮಾಮಯ || ||
ಪರಮ ಸ್ವರೂಪನು ತಾನಂತೆ |
ಅರಿಯಲು ಭಕ್ತಿಯು ಬೇಕಂತೆ |
ಒಲಿದರೆ ಪಾವನನವನಂತೆ
ಸಂಸಾರದ ಭಯ ಅವಗಿಲ್ಲಂತೆ || ೧ ||
ಗುರುವಿಗೆ ಸಮನಾರಿಲ್ಲಂತೆ
ಗುರು ಪಾದವ ನಂಬಿರಬೇಕಂತೆ |
ದೃಢತೆಯು ತನಗಿರಬೇಕಂತೆ |
ಧೃತಿಗೆಡದೆ ತಾನಿರಬೇಕಂತೆ || ೨ ||
ಪಾಪಿಗೆ ತಾ ಬಹುದೂರಂತೆ |
ದುರ್ಮಾರ್ಗಿಗೆ ಕಾಣನು ಗುರುವಂತೆ |
ಕುಟಿಲರಿಗೋಲಿಯನು ತಾನಂತೆ
ಕುಹಕಿಗೆ ಎಂದೂ ಸಿಗನಂತೆ || ೩ ||
ಜ್ಞಾನವೆ ತನ್ನುಸಿರಾಗಿಹುದು
ಉಸುರಲು ಪಾವನವಾಗುವುದು |
ಸೇವೆಯೆ ಸಾಧನೆಯಾಗಿಹುದು |
ಗುರು ಕರುಣೆಯೆ ಧನ್ಯನ ಮಾಡುವುದು || ೪ ||
ಶರಣಾಗತರನು ಕಾಯುವನು |
ಪರಮಾನಂದವ ನುಣಿಸುವನು
ನಿಜ ಭಕ್ತಿಗೆ ಗುರು ತಲೆ ಬಾಗುವನು |
ಭವ ಜಲಧಿಯ ದಾಂಟಿಸಿ ಕಾಯುವನು || ೫ ||
ನಾ ನೀಯೆಂಬುದನಳಿಯೆಂದಾ ||
ಮದ ಮತ್ಸರಗಳ ನೀ ಸುಡು ಎಂದಾ ||
ದುರುಳರಿಗೆ ನಾ ದೂರೆಂದಾ
ದುರಹಂಕಾರಿಗೆ ತಾ ಸಿಗನೆಂದಾ || ೬ ||
ಸದ್ದುರು ದೊರೆವುದು ದುರ್ಲಭವು ||
ದೊರೆತರೆ ಜನ್ಮವು ಪಾವನವು |
ಸಾರುತಲಿರುವವು ಶಾಸ್ತ್ರಗಳು |
ಗುರು ಪರಮೇಶ್ವರನಹುದೆಂದೂ || ೭ ||
ಅಚ್ಯುತ ಅನಂತ ಶ್ರೀ ಗುರುವೆ |
ಚಿನ್ಮಯ ಚಿದ್ಘನ ನೀ ಗುರುವೆ ||
ಗುರು ಕನ್ನೇಶ್ವರ ಬಾ ಗುರುವೆ ||
ಕರ ಜೋಡಿಸಿ ನಾ ಶಿರ ಬಾಗಿರುವೆ | ೮ ||
YouTube Video👇
English Lyrics
Dayamaya guru karunamaya |
Karunamaya guru premamaya || P ||
Parama swaroopanu tanante |
Ariyalu bhaktiyu Balance ||
Olidare pavananavanante|
Samsarada bhaya avagillante||1||
Guruvige samanarillante |
Gurupadava nambirabekante ||
Drudhateyu tanagirabekante |
Drutigedade tanirabekante||2||
Papige ta bahu durante|
Durmargige kananu guruvante||
Kutilarigoliyanu tenants|
Kuhakige endu siganante||3||
Jnanave tannusiraguvudu|
Usiralu pavana vaguvudu||
Seveye sadhane yagihudu|
Guru karuneye dhanyana maduvudu||4||
Sharanagataranu kayuvanu|
Paramanandavanunisuvanu||
Nija bhaktige guru tale baguvanu|
Bhava jaladhiya dantisi kayuvanu||5||
Naa Nee Embudanalienda|
Mada matsaragala nee sudu enda||
Durularige Naa durenda||
Durahankarige ta siganenda||6||
Sadguru dorevudu durlabhavu|
Doretare Janmavu Pavanavu||
Sarutaliruvavu Shastragalu|
Guru parameshvaranu ahudendu||7||
Achyuta ananta Sri guruve|
Chinmaya chidhghana nee guruve||
Guru Kanneshvara ba Guruve|
Kara jodisi Na shira bagiruve||8||
Copyright (c) 2022 Allinone Inform All Right Reserved